ಕ್ವಾಂಟಮ್ ಸೂಪರ್‌ಪೋಸಿಷನ್ ಮತ್ತು ಮಾನವ ಪ್ರಜ್ಞೆ - ಒಂದು ಅನಿರೀಕ್ಷಿತ ನಂಟು
ಕಣ
ಭೌತವಿಜ್ಞಾನ(Quantum
Physics) ಭೌತವಿಜ್ಞಾನದ ಒಂದು ಶಾಖೆ. ಇತ್ತಿಚ್ಚೀನ
ದಿನಗಳಲ್ಲಿ ಬಹುತೇಕ ಎಲ್ಲರ ಕಿವಿಯನ್ನು ತಲುಪಿರುವಂತಹ ಒಂದು ಶಬ್ಧ. ಹಾಗೆಂದರೇನು? ಎನ್ನುವುದು
ಎಷ್ಟು ಜನರಿಗೆ ಗೊತ್ತು ಎಂದು ಹೇಳುವುದು ಅಸಾಧ್ಯವಾದ ಕೆಲಸ. ಆದರೆ ಈ ಶಬ್ಧವನ್ನು ಮಾತ್ರ ಬಹುತೇಕರು
ಕೇಳಿರುತ್ತಾರೆ. ಕಾರಣ
ಅದು ಅಷ್ಟು ಮಹತ್ತರವಾದದ್ದು,
ಬಹುಷಃ
ಮಾನವಕುಲವನ್ನು ಸಹಸ್ರಾರು ವರ್ಷಗಳಿಂದ ಕಾಡಿರುವಂತಹ ಅತೀ ಮುಖ್ಯವಾದ ಮತ್ತು ಸರ್ವೇ ಸಾಮಾನ್ಯವಾದ
ಪ್ರಶ್ನೆಗಳಿಗೆ ಗಣೀತೀಯವಾಗಿ ಉತ್ತರ ಕಂಡುಹಿಡಿಯಲು ದಾರಿ ಇದಿರಬಹುದು ಎನ್ನುವುದು ಎಷ್ಟೋ
ಜ್ಞಾನಿಗಳ ನಂಬಿಕೆ.
ವಿಶ್ವವಿಖ್ಯಾತ
ಎರ್ವಿನ್ ಶ್ರೋಡಿಂಗರ್, ಆಸ್ಟ್ರೀಯನ್-ಐರಿಶ್
ಸೈಧ್ಧಾಂತಿಕ ಭೌತಶಾಸ್ತ್ರಜ್ಞರು(Theoretical Physicist), 1933ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ನೋಬೆಲ್
ಪ್ರಶಸ್ತಿಯನ್ನು ಪಡೆದವರು. ಇವರು
ಒಂದು ಕಲ್ಪಿತ ಪರೀಕ್ಷೆಯನ್ನು(Thought
Experiment) ಪ್ರಪಂಚದ ಮೆದುಳುಗಳ ಎದುರಿಗೆ ಇರಿಸಿದ್ದಾರೆ. ಕಣ
ಭೌತವಿಜ್ಞಾನದ ವಿಶೇಷತೆ ಮತ್ತು ವಿಚಿತ್ರತೆಗಳನ್ನು ತಿಳಿಸುವಲ್ಲಿ ಈ ಕಲ್ಪಿತ ಪರೀಕ್ಷೆಗಿಂತ
ನಿಖರವಾದ ಮಾರ್ಗ ಬೇರೋಂದಿಲ್ಲ.
ಈ
ಕಲ್ಪಿತ ಪರೀಕ್ಷೆ ಈ ಕೆಳಗಿನಂತಿದೆ. ಹಾಗೂ ಸರಳತೆಯ ಉದ್ದೇದಿಂದ ಕೆಲವು ಧೀರ್ಘ ಅಂಶಗಳನ್ನು
ಗಣನೆಗೆ ತೆಗೆದುಕೊಳ್ಳದೇ ಇರಬಹುದು.
ಒಂದು
ಮುಚ್ಚಿದ ಪೆಟ್ಟಿಗೆ, ಒಂದು
ಬೆಕ್ಕು, ಸ್ವಲ್ಪ
ಪ್ರಮಾಣದಲ್ಲಿ ವಿಕಿರಣಶೀಲ ವಸ್ತು, ಗೀಗರ್ ಕೌಂಟರ್(Gieger Counter), ವಿಷದ
ಸೀಸೆ, ಇಷ್ಟನ್ನು
ಊಹಿಸಿ ಮತ್ತು ಈ ಕೆಳಗಿನಂತೆ ಜೋಡಿಸಲಾಗಿದೆ ಎಂದುಕೊಳ್ಳಿ. ಮುಚ್ಚಿದ ಪೆಟ್ಟಿಗೆಯಲ್ಲಿ ಜೀವಂತ ಬೆಕ್ಕು
ಇದೆ, ಮತ್ತು
ವಿಕಿರಣಶೀಲ ವಸ್ತು, ವಿಷದ
ಸೀಸೆಯನ್ನು ಗೀಗರ್ ಕೌಂಟರ್‌ಗೆ ಜೋಡಿಸಲಾಗಿದೆ. ವಿಕಿರಣಶೀಲ ವಸ್ತು ವಿಕಿರಣಗಳನ್ನು ಹೊರಸೂಸಿದೆ(Radioactive Decay) ಎಂದುಕೊಳ್ಳಿ, ಗೀಗರ್
ಕೌಂಟರ್ ಅದನ್ನು ಗ್ರಹಿಸುತ್ತದೆ. ಅದರ ಪರಿಣಾಮವಾಗಿ ವಿಷದ ಸೀಸೆ ಒಡೆಯುವ ಹಾಗೆ ಸಿಧ್ಧತೆ
ಮಾಡಲಾಗಿದೆ. ವಿಷದ
ಪರಿಣಾಮವಾಗಿ ಬೆಕ್ಕು ಸಾಯುತ್ತದೆ. ಮುಚ್ಚಿದ
ಪೆಟ್ಟಿಗೆಯಲ್ಲಿ ವಿಕಿರಣಶೀಲ ವಸ್ತು ಕೊಳೆತು ವಿಕಿರಣಗಳನ್ನು ಹೊರಸೂಸುವ ಸಂಭವನೀಯತೆ ಶೇ. ೫೦%. ವಿಕಿರಣಗಳನ್ನು
ಹೊರಸೂಸದೇ ಇರುವ ಸಂಭವನೀಯತೆಯೂ ಸಹ ಶೇ. ೫೦%. ಇದರ ಪರಿಣಾಮವಾಗಿ ಪೆಟ್ಟಿಗೆಯನ್ನು ತೆರೆದು ನೋಡುವ ತನಕ
ಬೆಕ್ಕು ಬದುಕಿದೆಯೋ? ಅಥವ
ಸತ್ತಿದೆಯೋ? ಎನ್ನುವುದು
ತಿಳಿಯುವುದಿಲ್ಲ. ಆ
ಮುಚ್ಚಿದ ಪೆಟ್ಟಿಗೆಯಲ್ಲಿ ಬೆಕ್ಕು ಏಕಕಾಲಕ್ಕೆ ಬದುಕಿಯೂ ಹಾಗೂ ಸತ್ತು ಇರುತ್ತದೆ. ಏಕಕಾಲದಲ್ಲಿ
ಎರಡು ಸ್ಥಿತಿಗಳಲ್ಲಿ ಬೆಕ್ಕು ಇರುವುದನ್ನೇ Quantum Superposition State ಎಂದು
ಕರೆಯಲಾಗುತ್ತದೆ.
ಇಲ್ಲಿಂದಲೇ
ವಿಶೇಷತೆ ಆರಂಭವಾಗೋದು, ಪೆಟ್ಟಿಗೆಯನ್ನು
ಯಾರೂ ನೋಡದೇಯಿದ್ದಾಗ ಅಂದರೆ ಮಚ್ಚಿದ ಪೆಟ್ಟಿಗೆಯಲ್ಲಿ ಬೆಕ್ಕು ಏಕಕಾಲದಲ್ಲಿ(Simultaneously) ಬದುಕಿಯೂ
ಹಾಗೂ ಸತ್ತು ಇರುತ್ತದೆ. ಪೆಟ್ಟಿಗೆಯನ್ನು
ಯಾರಾದರೂ ತೆರೆದು ನೋಡಿದಾಗ(Observer)
ವೇವ್-ಫಂಕ್ಷನ್(Wave Function) ಪತನಗೊಂಡು(Collapse), ನೋಡಿದವರಿಗೆ
ಯಾವುದಾದರೂ ಒಂದು ಸ್ಥಿತಿ ಕಂಡುಬರುತ್ತದೆ. ಬೆಕ್ಕು ಬದುಕಿರಬಹುದು ಅಥವ ಸತ್ತಿರಬಹುದು. ಇಷ್ಟಕ್ಕೆ
ಗಾಬರಿಯಾಗಬೇಕಾದ ಅವಶ್ಯಕತೆಯಿಲ್ಲ, ಇದರಿಂದ ಮುಂದೆ ಹೊರಟರೆ ಸಮಾಂತರ ಪ್ರಪಂಚಗಳ(parallel Worlds) ಬಗ್ಗೆ
ಮಾತನಾಡಬಹುದು. ಆದರೆ
ಅದರ ಬದಲು ಈ ಬರಹದ ತಲೆಬರಹ ಹೇಳುವಂತೆ ಒಂದು ಅನಿರೀಕ್ಷಿತ ನಂಟನ್ನು ಈ ಕ್ವಾಂಟಮ್ ಸೂಪರ್‌ಪೋಸಿಷನ್
ಸ್ಟೇಟ್ ಮತ್ತು ಮನುಷ್ಯನ ಪ್ರಜ್ಞೆ(Consciousness)ಯ ನಡುವೆ ನಾವು ಕಾಣಬಹುದಾಗಿದೆ.
ಇದರಂತೆಯೇ
ಮನುಷ್ಯನ ಪ್ರಜ್ಞೆ,
ಮನಸ್ಸು, ಆತ್ಮ
ಅಥವ ನೀವು ಏನಾದರು ಕರೆಯಬಹುದು,
ಅದು ಸಹ. ಭಗವದ್ಗೀತೆಯಲ್ಲಿ
ಶ್ರೀ ಕೃಷ್ಣ ಹೇಳುವ ಹಾಗೆ ಸುಖ ಮತ್ತು ದುಃಖಗಳು ಜೀವನದಲ್ಲಿ ಬರುವ ಬೇಸಿಗೆ ಮತ್ತು ಚಳಿಗಾಲಗಳಂತೆ
, ಅವು
ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ. ಹಾಗೆಯೇ ಸುಖ-ದುಃಖಗಳಿಗೆ ತನ್ನ ಇರುವಿಕೆಯನ್ನು ಸಮರ್ಪಿಸದೇ ಎರಡರಲ್ಲೂ
ಒಂದೇ ರೀತಿಯಾಗಿ ಬಾಳುವವನು ನಿಜವಾದ ಜ್ಞಾನಿ.
ಆ
ರೀತಿಯಾಗಿ ಬದುಕುತ್ತಿರುವಾಗ ನಾವು ಸಂತೋಷವಾಗಿ, ಆರಾಮವಾಗಿ ಬದುಕಿದ್ದೇವೆಯೋ? ಅಥವ
ದುಃಖದಲ್ಲಿದ್ದೆವೆಯೋ? ಎನ್ನುವ
ಪ್ರಮೇಯವೇ ಬರುವುದಿಲ್ಲ. ಆ ಎರಡೂ
ಏಕಕಾಲದಲ್ಲಿ ಸತ್ಯವೂ ಹೌದು ಹಾಗೂ ಸುಳ್ಳೂ ಹೌದು. ಆದರೆ ಒಮ್ಮೆ ಆ ತರಹದ ಆಲೋಚನೆಗಳು ಬಂತೆಂದರೆ, ಡಬ್ಬಿಯನ್ನು
ತೆರೆದು ನೋಡುವ Obserever ಬಂದ
ಹಾಗೆ, ಸುಖ
ಎಂದುಕೊಂಡರೆ ಸಂತೋಷ, ನಾವು
ದುಃಖದಿಂದ್ದೇವೆ ಎಂದುಕೊಂಡರೇ ಇನ್ನು ಹೆಚ್ಚಿನ ದುಃಖ ನಿಮಗೆ ದೊರಕುತ್ತದೆ. ಅಂದರೆ
ಆ ಪರಿಸ್ಥಿತಿಗೆ ವೇವ್-ಫಂಕ್ಷನ್
ಪತನವಾಗುತ್ತದೆ.
ಆದರೆ
ಒಂದು ವಿನಾಯಿತಿಯಿದೆ. ಕೆಲವರ
ಬಾಯಲ್ಲಿ ನೀವು ಕೇಳಿರಬಹುದು,
"ನಾನು ಎಷ್ಟೇ ಖುಷಿಯಾಗಿರಲು ಬಯಸಿದರೂ ಆಗುತ್ತಿಲ್ಲ, ಹೆಚ್ಚು
ದುಃಖ ದೊರೆಯುತ್ತಿದೆ. The
more I tŗy the harder it gets." ಈ ತರಹದ್ದು. ಇದಕ್ಕೆ
ನಾನು ತಿಳಿಯುವುದೇನೆಂದರೆ, ಈ ರೀತಿ
ಹೇಳಿ ಗೆಲುವು/ಸುಖವನ್ನು
ಬಯಸುವವರು ಮೂಲತಃ ಸೋಲು/ದುಃಖ
ಎಂದರೆ ಭಯಪಡುತ್ತಿರುತ್ತಾರೆ.
ತಮಗೆ
ಅರಿವಿಲ್ಲದೇ ಉಪಪ್ರಜ್ಞೆಯ ಆಟಕ್ಕೆ ಸಿಲುಕಿ ಅವರು ಸೋಲು ಅಥವ ದುಃಖದ ಕುರಿತು ಸದಾ
ಚಿಂತಿಸುತ್ತಿರುತ್ತಾರೆ. ಅರಿವಿರುವಂತೆ
ಹೇಳುವುದೊಂದಾದರೂ ಅರಿವಿಲ್ಲದೇ ಸದಾ ಚಿಂತಿಸುವುದು ಮತ್ತು ಅಂತಃಶಕ್ತಿಯನ್ನು ಸದಾ ವ್ಯಯಿಸುವುದು
ಅದರ ವಿರುಧ್ಧವಾದದ್ದಕ್ಕೆ. ಹಾಗಾಗಿ
ಮೊದಲು ಬಯಸಿದ ದುಃಖ ಹಾಗೂ ಸೋಲೇ ಅವರಿಗೆ ದೊರಕುವುದು. ಅಂದರೆ ಅವರ ಪ್ರಜ್ಞೆ/ಉಪಪ್ರಜ್ಞೆ ಮೊದಲು Observe ಮಾಡಿದ
ಸ್ಥಿತಿಗಳಾದ ದುಃಖ ಮತ್ತು ಸೋಲಿಗೆ ವೇವ್-ಫಂಕ್ಷನ್ ಪತನವಾಗುವುದು.
ಒಂದು
ಅನಿರೀಕ್ಷಿತವಾದ ನಂಟು/ಲಿಂಕ್
ಎಂದರೆ, ಉಪನಿಷತ್ತುಗಳಲ್ಲಿ
ಹಾಗೂ ಭಗವದ್ಗೀತೆಯಲ್ಲಿ ಆತ್ಮವೂ ಶಾಶ್ವತವಾದದ್ದೂ, ಅತೀ ಸೂಕ್ಷ್ಮವಾದದ್ದೂ ಹಾಗೂ ವಿನಾಶವಿಲ್ಲದ್ದು ಎಂದು
ಹೇಳಲಾಗಿದೆ. ಗಮನಿಸಬೇಕಾದ
ಅಂಶವೆಂದರೆ, ಅತೀ
ಸೂಕ್ಷ್ಮವಾದದ್ದು. ಎಂದರೆ
ಇದಕ್ಕಿಂತ ಚಿಕ್ಕದಾದ ಅಂಶ ಬೇರೊಂದಿಲ್ಲ ಎಂದು. ದೇಹ ನಿಮಿತ್ತ ಆತ್ಮ ಶಾಶ್ವತ ಎಂದಾದರೆ, ಆಗುವ
ಅನುಭವಗಳನ್ನು ನೋಡುವ/ತಿಳಿಯುವ
Observer ಆತ್ಮವಾಗಿದೆ. ಅದು
ಮೊದಲು ಯಾವ ಸಂಭವನೀಯತೆಯನ್ನು Observe
ಮಾಡುತ್ತದೋ, ಆ
ಸ್ಥಿತಿಗೆ ವೇವ್-ಫಂಕ್ಷನ್
ಪತನವಾಗಿ ಅದು ನಮಗಾಗುವ ಅನುಭವವಾಗುತ್ತದೆ.
ಅಣುವೇ
ಅತೀ ಸಣ್ಣದು ಎಂದುಕೊಂಡಿದ್ದೇವು, ನಂತರ ಅದರಲ್ಲಿನ ಎಲೆಕ್ಟ್ರಾನು ಮತ್ತು ಪ್ರೋಟಾನುಗಳು
ಎಂದುಕೊಂಡೆವು, ಆದರೆ
ಅವಕ್ಕಿಂತ ಸಣ್ಣ ಪಾರ್ಟಿಕಲ್ಸ್‌ಗಳನ್ನ ಈಗಾಗಲೇ ಇದೇ ಕಣ-ಭೌತವಿಜ್ಞಾನ ನಮ್ಮ ಮುಂದಿರಿಸಿದೆ. ಇದನ್ನೆಲ್ಲ
ನಮ್ಮ ಋಷಿಮುನಿಗಳು ಮೊದಲೇ ತಿಳಿದಿದ್ದರು ಎಂದೆನ್ನಿಸುತ್ತದೆ. ಹಾಗಾಗಿ ಸಹಸ್ರಾರು ವರ್ಷಗಳ ವೈಜ್ಞಾನಿಕ
ಸಾಧನೆಗಳ ನಂತರ ಮತ್ತೇ ಅಲ್ಲಿಗೆ ಬಂದು ತಲುಪುತ್ತಿದ್ದೇವೆ. ಇದು ಮತ್ತೊಂದು ವಿಶೇಷವಾದ ನಂಟು.
Comments
Post a Comment