Posts

ಲೇಖಕನೂ ಇದನ್ನೇ ವ್ಯಾಖ್ಯಾನಿಸಿದ್ದನಾ?

  ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಬಹಳಷ್ಟು ಸಮಯವನ್ನು ಯಾವುದಾದರೊಂದು ಕಲೆಯ ಪ್ರಕಾರವನ್ನು ನೋಡಿರಲು ಅಥವ  ಕೇಳಿರಲು ಉಪಯೋಗಿಸಿರುತ್ತಾನೆ.  ಸಾಹಿತ್ಯ, ಸಂಗೀತ, ಪುಸ್ತಕಗಳನ್ನು ಓದುವುದು, ಹಾಡುಗಳನ್ನು ಕೇಳುವುದು, ಚಲನಚಿತ್ರಗಳನ್ನು ನೋಡುವುದು. ಒಂದೇ-ಎರಡೇ,  ಹೀಗೆ ಇನ್ನೂ ಎಷ್ಟೋ ವಿಧದಲ್ಲಿ ಮನುಷ್ಯ ಸಹಸ್ರಾರು ಗಂಟೆಗಳಷ್ಟು ಅವಧಿಯನ್ನು ಯಾವುದಾದರೂ ಅಥವ ಎಲ್ಲ ವಿಧದ  ಕಲೆಯನ್ನು ಸೃಷ್ಠಿಸುವುದರಲ್ಲಿ ಅಥವ ಅನುಭವಿಸುವುದರಲ್ಲಿ ಉಪಯೋಗಿಸಿರುತ್ತಾನೆ.  ಎಷ್ಟು ಜನ ಮನುಷ್ಯರೋ ಅಷ್ಟು ವಿಧದ ಚಿಂತನೆಗಳು, ಅನುಭವಗಳು . ಕೇವಲ ಭೌತಿಕವಾಗಿ ಮಾತ್ರವಲ್ಲದೇ ಪ್ರತಿಯೊಂದು ಚಿಕ್ಕ-ಚಿಕ್ಕ ಅಂಶಗಳಲ್ಲಿಯೂ ಸಹ ಒಬ್ಬರಂತೆ ಇನ್ನೊಬ್ಬರಿಲ್ಲ, ಪ್ರತಿಯೊಬ್ಬರೂ ಬೇರೆಯೇ. ಹಾಗೆಯೇ ಒಬ್ಬ ವ್ಯಕ್ತಿಯ ಸಾಹಿತ್ಯ, ಹಾಗೂ ಅದು ಪ್ರಕಟಿಸುವ ಭಾವವು ಓದುವುನಿಗೆ ಗ್ರಹಿಕೆಯಾಗುವುದು, ಬರೆದ ಸಾಹಿತಿಯ ಉದ್ದೇಶ, ಅನುಭವ ಹಾಗೂ ತಿಳುವಳಿಕೆಯ ಆಧಾರದ ಮೇಲೆ ಮಾತ್ರವಲ್ಲ, ಬದಲಿಗೆ ಓದುವ ವ್ಯಕ್ತಿಯ ತಿಳುವಳಿಕೆ, ಗ್ರಹಣಶಕ್ತಿ, ಜೀವನಾನುಭವ ಅಷ್ಟೇ ಏಕೆ ಓದುವ ಸಮಯ ಹಾಗೂ ಓದುವಾಗಿದ್ದ ಆತನ ಮನಸ್ಥತಿಯ ಮೇಲೂ ಸಹ ವ್ಯಾಪಕವಾಗಿ ಅವಲಂಬಿತವವಾಗಿದೆ. ಇನ್ನೂ ಕೇಲವು ಬಾರಿ ಸಾಹಿತ್ಯವನ್ನು ಬರೆದ ಕವಿ ತಾತ್ವಿಕವಾಗಿ ಅಷ್ಟು ಆಳದಲ್ಲಿ ಆಲೋಚಿಸಿರದ ಯಾವುದೋ ಒಂದು ಸಾಲು ಮುಂದೆ ಯಾರೋ ಓದುಗ ತನ್ನ ಜೀವನದ ತತ್ವಶಾಸ್ತ್ರದ ಉಪ್ಪು-ಕಾರ ಹಾಕ...

ಕತೆಗಾರನೊಬ್ಬನ ಪಾತ್ರದಲ್ಲಿ:

 ನಮಸ್ಕಾರ,      ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟನ್ನು ಕಲಿಯುತ್ತಾನೆ, ಸಾಕಷ್ಟನ್ನು ಕಲಿಸುತ್ತಾನೆ. ಕಲಿತ ಅಥವ ಕಲಿಸಿದ ಎಷ್ಟೋ ವಿದ್ಯೆಗಳು, ತಿಳುವಳಿಕೆ, ಸತ್ಯ, ಜ್ಞಾನ ಎಲ್ಲವನ್ನು ಪ್ರತಿ ಮನುಷ್ಯನು ತನ್ನದ್ದೆಂದು ಪೂರ್ವನಿಯೋಜಿತವಾಗಿಯೇ ಭಾವಿಸುತ್ತಾನೆ. ಆದರೆ ಯಾವಾಗಲಾದರೊಂದು  ಕ್ಷಣ ʼತನ್ನದುʼ ಎನ್ನುವ ಆ ಭಾವನೆಯನ್ನು ನಾಶ ಮಾಡಿ, ನೈಜತೆಯ ಹುಡುಕಾಟದ ದೃಷ್ಟಿಯಿಂದ ನೋಡಿದಾಗ ತಿಳಿಯುತ್ತದೆ,ಕೇವಲ ಭೌತಿಕ ಮತ್ತು  ಪ್ರಾಪಂಚಿಕವಾದ ವಸ್ತುಗಳು ಮಾತ್ರವಲ್ಲದೇ, ತನ್ನಲ್ಲಿರುವ ಶ್ರೇಷ್ಠ ಅಂಶ ಎಂದವನು ಹೆಮ್ಮೆಯಿಂದಿರುವ ಅವನ ಜ್ಞಾನವನ್ನು ಸಹ   ಆತ ಪ್ರಪಂಚದಿಂದ ಎರವಲು ಪಡೆದದ್ದು  ಎಂದು. ಇಷ್ಟೇ  ನಾವು  ಮನುಷ್ಯರು ಎಂದು. ಇದನ್ನು ಜೀರ್ಣಿಸಿಕೊಳ್ಳಲು ಎರಡು ದೃಷ್ಟಿಕೋನಗಳುಂಟು, ಮೊದಲನೇಯದು, ಯಾವುದೂ ಸಹ  ನನ್ನದ್ದಲ್ಲ ಎಂದು  ದುಃಖಿಸುವುದು. ಎರಡನೇಯದು, ಎಲ್ಲವೂ  ನನಗಾಗಿಯೇ ಇದೆ ಎಂದುಕೊಳ್ಳುವುದು. ಆದಿಕಾಲದಿಂದಲೂ  ತಿಳಿದೆಲ್ಲರೂ ಹೇಳಿದ್ದು  ಎರಡನೇಯ ಭಾವವೇ ಘನವಾದದ್ದು  ಎಂದು.  ಬಾಲ್ಯದಿಂದಲೂ ಹೀಗೆ ಸಹಸ್ರಾರು ಕತೆಗಳನ್ನು ಕೇಳಿ, ನೋಡಿ , ಹೇಳಿ , ಮಾತನಾಡಿ ಬಂದಿರುವ ನನ್ನಲ್ಲಿಯೂ  ಸಹ ಒಬ್ಬ ಕತೆಗಾರ ನಿದ್ದಾನೆ.(ನನ್ನಲ್ಲಿ  ಮಾತ್ರವಲ್ಲ ನಿಮ್ಮೆಲ್ಲರಲ್ಲಿಯೂ ಸಹ  ಇದ್ದಾನೆ/ಳೆ). ಕತೆ ಹೇಳಬಯಸುವ ಅವನ ...

ಕ್ವಾಂಟಮ್ ಸೂಪರ್‌ಪೋಸಿಷನ್ ಮತ್ತು ಮಾನವ ಪ್ರಜ್ಞೆ - ಒಂದು ಅನಿರೀಕ್ಷಿತ ನಂಟು

  ಕಣ ಭೌತವಿಜ್ಞಾನ (Quantum Physics) ಭೌತವಿಜ್ಞಾನದ ಒಂದು ಶಾಖೆ . ಇತ್ತಿಚ್ಚೀನ ದಿನಗಳಲ್ಲಿ ಬಹುತೇಕ ಎಲ್ಲರ ಕಿವಿಯನ್ನು ತಲುಪಿರುವಂತಹ ಒಂದು ಶಬ್ಧ . ಹಾಗೆಂದರೇನು ? ಎನ್ನುವುದು ಎಷ್ಟು ಜನರಿಗೆ ಗೊತ್ತು ಎಂದು ಹೇಳುವುದು ಅಸಾಧ್ಯವಾದ ಕೆಲಸ . ಆದರೆ ಈ ಶಬ್ಧವನ್ನು ಮಾತ್ರ ಬಹುತೇಕರು ಕೇಳಿರುತ್ತಾರೆ . ಕಾರಣ ಅದು ಅಷ್ಟು ಮಹತ್ತರವಾದದ್ದು , ಬಹುಷಃ ಮಾನವಕುಲವನ್ನು ಸಹಸ್ರಾರು ವರ್ಷಗಳಿಂದ ಕಾಡಿರುವಂತಹ ಅತೀ ಮುಖ್ಯವಾದ ಮತ್ತು ಸರ್ವೇ ಸಾಮಾನ್ಯವಾದ ಪ್ರಶ್ನೆಗಳಿಗೆ ಗಣೀತೀಯವಾಗಿ ಉತ್ತರ ಕಂಡುಹಿಡಿಯಲು ದಾರಿ ಇದಿರಬಹುದು ಎನ್ನುವುದು ಎಷ್ಟೋ ಜ್ಞಾನಿಗಳ ನಂಬಿಕೆ .          ವಿಶ್ವವಿಖ್ಯಾತ ಎರ್ವಿನ್‌ ಶ್ರೋಡಿಂಗರ್‌ , ಆಸ್ಟ್ರೀಯನ್ - ಐರಿಶ್‌ ಸೈಧ್ಧಾಂತಿಕ ಭೌತಶಾಸ್ತ್ರಜ್ಞರು (Theoretical Physicist),   1933 ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ನೋಬೆಲ್‌ ಪ್ರಶಸ್ತಿಯನ್ನು ಪಡೆದವರು . ಇವರು ಒಂದು ಕಲ್ಪಿತ ಪರೀಕ್ಷೆಯನ್ನು (Thought Experiment) ಪ್ರಪಂಚದ ಮೆದುಳುಗಳ ಎದುರಿಗೆ ಇರಿಸಿದ್ದಾರೆ . ಕಣ ಭೌತವಿಜ್ಞಾನದ ವಿಶೇಷತೆ ಮತ್ತು ವಿಚಿತ್ರತೆಗಳನ್ನು ತಿಳಿಸುವಲ್ಲಿ ಈ ಕಲ್ಪಿತ ಪರೀಕ್ಷೆಗಿಂತ ನಿಖರವಾದ ಮಾರ್ಗ ಬೇರೋಂದಿಲ್ಲ . ಈ ಕಲ್ಪಿತ ಪರೀಕ್ಷೆ ಈ ಕೆಳಗಿನಂತಿದೆ . ಹಾಗೂ ಸರಳತೆಯ ಉದ್ದೇದಿಂದ ಕೆಲವು ಧೀರ್ಘ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರಬಹುದು . ...