Posts

Showing posts from November, 2025

ಲೇಖಕನೂ ಇದನ್ನೇ ವ್ಯಾಖ್ಯಾನಿಸಿದ್ದನಾ?

  ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಬಹಳಷ್ಟು ಸಮಯವನ್ನು ಯಾವುದಾದರೊಂದು ಕಲೆಯ ಪ್ರಕಾರವನ್ನು ನೋಡಿರಲು ಅಥವ  ಕೇಳಿರಲು ಉಪಯೋಗಿಸಿರುತ್ತಾನೆ.  ಸಾಹಿತ್ಯ, ಸಂಗೀತ, ಪುಸ್ತಕಗಳನ್ನು ಓದುವುದು, ಹಾಡುಗಳನ್ನು ಕೇಳುವುದು, ಚಲನಚಿತ್ರಗಳನ್ನು ನೋಡುವುದು. ಒಂದೇ-ಎರಡೇ,  ಹೀಗೆ ಇನ್ನೂ ಎಷ್ಟೋ ವಿಧದಲ್ಲಿ ಮನುಷ್ಯ ಸಹಸ್ರಾರು ಗಂಟೆಗಳಷ್ಟು ಅವಧಿಯನ್ನು ಯಾವುದಾದರೂ ಅಥವ ಎಲ್ಲ ವಿಧದ  ಕಲೆಯನ್ನು ಸೃಷ್ಠಿಸುವುದರಲ್ಲಿ ಅಥವ ಅನುಭವಿಸುವುದರಲ್ಲಿ ಉಪಯೋಗಿಸಿರುತ್ತಾನೆ.  ಎಷ್ಟು ಜನ ಮನುಷ್ಯರೋ ಅಷ್ಟು ವಿಧದ ಚಿಂತನೆಗಳು, ಅನುಭವಗಳು . ಕೇವಲ ಭೌತಿಕವಾಗಿ ಮಾತ್ರವಲ್ಲದೇ ಪ್ರತಿಯೊಂದು ಚಿಕ್ಕ-ಚಿಕ್ಕ ಅಂಶಗಳಲ್ಲಿಯೂ ಸಹ ಒಬ್ಬರಂತೆ ಇನ್ನೊಬ್ಬರಿಲ್ಲ, ಪ್ರತಿಯೊಬ್ಬರೂ ಬೇರೆಯೇ. ಹಾಗೆಯೇ ಒಬ್ಬ ವ್ಯಕ್ತಿಯ ಸಾಹಿತ್ಯ, ಹಾಗೂ ಅದು ಪ್ರಕಟಿಸುವ ಭಾವವು ಓದುವುನಿಗೆ ಗ್ರಹಿಕೆಯಾಗುವುದು, ಬರೆದ ಸಾಹಿತಿಯ ಉದ್ದೇಶ, ಅನುಭವ ಹಾಗೂ ತಿಳುವಳಿಕೆಯ ಆಧಾರದ ಮೇಲೆ ಮಾತ್ರವಲ್ಲ, ಬದಲಿಗೆ ಓದುವ ವ್ಯಕ್ತಿಯ ತಿಳುವಳಿಕೆ, ಗ್ರಹಣಶಕ್ತಿ, ಜೀವನಾನುಭವ ಅಷ್ಟೇ ಏಕೆ ಓದುವ ಸಮಯ ಹಾಗೂ ಓದುವಾಗಿದ್ದ ಆತನ ಮನಸ್ಥತಿಯ ಮೇಲೂ ಸಹ ವ್ಯಾಪಕವಾಗಿ ಅವಲಂಬಿತವವಾಗಿದೆ. ಇನ್ನೂ ಕೇಲವು ಬಾರಿ ಸಾಹಿತ್ಯವನ್ನು ಬರೆದ ಕವಿ ತಾತ್ವಿಕವಾಗಿ ಅಷ್ಟು ಆಳದಲ್ಲಿ ಆಲೋಚಿಸಿರದ ಯಾವುದೋ ಒಂದು ಸಾಲು ಮುಂದೆ ಯಾರೋ ಓದುಗ ತನ್ನ ಜೀವನದ ತತ್ವಶಾಸ್ತ್ರದ ಉಪ್ಪು-ಕಾರ ಹಾಕ...